ನಮ್ಮ ಪರಿಚಯ
ಬನ್ನಿ, ಜನ್ಮ ಜಾತ ಹೃದಯ ದೋಷದ (Congenital Heart Disease) ವಿರುದ್ದ ಜೊತೆಯಾಗಿ ಹೋರಾಡೋಣ. ಗ್ಲೋಬಲ್ ಹಾರ್ಟ್ ನೆಟ್ ವರ್ಕ್ (GHN) ಒಂದು ಜಾಗತಿಕ ವೇದಿಕೆ. ಜಗತ್ತಿನಾದ್ಯಂತ CHD ಹೃದ್ರೋಗದ ಚಿಕಿತ್ಸೆಯ ಅಗತ್ಯವಿರುವವರನ್ನು ಮತ್ತು ಅವರ ಕುಟುಂಬದವರನ್ನು ಅವರ ಹತ್ತಿರದಲ್ಲಿರುವ ಹೃದಯ ಆರೋಗ್ಯದ ಸೇವಾ ಸೌಲಭ್ಯಗಳೊಂದಿಗೆ ಸಂಪರ್ಕಗೊಳಿಸುವುದು ಇದರ ಉದ್ದೇಶ. ಅದಲ್ಲದೆ, ಈ ವೇದಿಕೆಯ ಮೂಲಕ ವೈದ್ಯಕೀಯ ತಜ್ಞರನ್ನು ಪ್ರಪಂಚದ ಹಲವಾರು ಜನೋಪಕಾರಿ ಸಂಸ್ಥೆಗಳ ಜೊತೆಗೆ ಒಗ್ಗೂಡಿಸಿ, ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗುವಂತೆ ಮಾಡುವ ಒಂದು ಪ್ರಯತ್ನ ಕೂಡ ಇದಾಗಿದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ನಮ್ಮ ಪ್ರಯತ್ನ, ನಮ್ಮ ಸಾಧನೆಗಳು, ಸೇವಾ ಕಾರ್ಯಗಳು ಹಾಗೂ ಅದರ ಪರಿಣಾಮಗಳನ್ನು ಹಂಚಿಕೊಳ್ಳಲು ಇದು ಒಂದು ಉಪಯುಕ್ತವಾದ ವೇದಿಕೆ.
ಪರಸ್ಪರ ಸಹಾನುಭೂತಿ ಮತ್ತು ಸಹಕಾರ - ಇವುಗಳ ಶಕ್ತಿಯಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ನಾವೆಲ್ಲಾ ಒಟ್ಟಾದರೆ ಜನ್ಮಜಾತ ಹೃದ್ರೋಗದಿಂದ ಪೀಡಿತರಾದವರಿಗೆ ಸಹಾಯವಷ್ಟೇ ಅಲ್ಲದೆ ಅವರ ಜೀವನವನ್ನೇ ಮಾರ್ಪಡಿಸುವ ಈ ಸದಾವಕಾಶವನ್ನು ಒದಗಿಸಿ ಅವರ ಜೀವನದಲ್ಲಿ ಭರವಸೆಯನ್ನು ಮೂಡಿಸಬಹುದು.
ನಮ್ಮ ಉದ್ದೇಶ
ಜನ್ಮ ಜಾತ ಹೃದಯ ದೋಷ (Congenital Heart Disease) ಪೀಡಿತರಿಗೆ ಪ್ರಾಣದಾಯಕವಾದ ಹೃದಯ ಚಿಕಿತ್ಸೆಯು ಸುಲಭವಾಗಿ ದೊರಕುವಂತೆ ಮಾಡುವುದೇ ನಮ್ಮ ಉದ್ದೇಶ. ಇಂತಹ ಅಗತ್ಯವಿರುವ ಜನರಿಗೆ ಹಾಗೂ ಅವರ ಕುಟುಂಬದವರಿಗೆ ಈ ಮೂಲಕ ಒಂದು ಅರ್ಥಪೂರ್ಣ ಜೀವಿತವನ್ನು ನೀಡಲು ನಾವು ಬಧ್ಧರಾಗಿದ್ದೇವೆ.
ನಮ್ಮ ಧ್ಯೇಯ
ಜಗತ್ತಿನಾದ್ಯಂತ ಜನ್ಮಜಾತ ಹೃದ್ರೋಗದಿಂದ ಬಳಲುತ್ತಿರುವ ಯಾವುದೇ ವ್ಯಕ್ತಿ ಅಥವಾ ಸಮುದಾಯವು ಸೂಕ್ತವಾದ ಆರೋಗ್ಯ ಸೇವೆಯಿಲ್ಲದೆ ಅಥವಾ ಅದಕ್ಕೆ ಬೇಕಾದ ಸಹಾಯವಿಲ್ಲದೆ ಬಾಧಿತರಾಗಿರಬಾರದು. ಇದಕ್ಕಾಗಿ ಬೇಕಾದ ವ್ಯವಸ್ಥೆಗಳು ಹಾಗೂ ಜನ-ಧನ ಸಹಾಯವನ್ನು ಒದಗಿಸಲೆಂದೇ ಈ ಜಾಗತಿಕ ವೇದಿಕೆಯ ಪರಿಕಲ್ಪನೆ ಹಾಗೂ ನಿರ್ಮಾಣ.