ನಮ್ಮ ಸಹಭಾಗಿಗಳು
ನಮ್ಮ ಸಹಭಾಗಿಗಳ ಸೇವೆಗಳ ಕುರಿತು ಮಾಹಿತಿ
ಕಲಾಂಗೋಸ್ ಫೌಂಡೇಶನ್
ಮಧ್ಯಮ ಮತ್ತು ಕಡಿಮೆ-ಆದಾಯದ ದೇಶಗಳಲ್ಲಿ ವಾಸಿಸುತ್ತಿರುವ ಜನ್ಮಜಾತ ಮತ್ತು ಇತರೆ ಹೃದಯದ ಕಾಯಿಲೆಗಳಿಂದ ಬಳಲುತ್ತಿರುವ ಎಲ್ಲ ಮಕ್ಕಳಿಗೆ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯ ಒದಗಿಸುವುದು ಈ ಫೌಂಡೇಶನ್ ನ ಗುರಿಯಾಗಿದೆ. 1998 ರಿಂದ 17000 ಕ್ಕೂ ಹೆಚ್ಚು ಮಕ್ಕಳಿಗೆ ಅವರ ಸ್ವಂತ ದೇಶಗಳಲ್ಲಿ ಅಥವಾ ಯುರೋಪಿನ ಹಲವಾರು ವೈದ್ಯಕೀಯ ಆರೈಕೆ ಘಟಕಗಳಲ್ಲಿ “ಕಲಂಗೋಸ್ ಫೌಂಡೇಶನ್” ತಂಡವು ಚಿಕಿತ್ಸೆ ನೀಡಿದೆ.
ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
"ಗ್ರಾಮೀಣದಲ್ಲಿ- ಗ್ರಾಮೀಣಕ್ಕೋಸ್ಕರವಾಗಿ" ಎಂಬ ದೂರದೃಷ್ಟಿಯುಳ್ಳ ಈ ಉಚಿತ ವೈದ್ಯಕೀಯ ಕಾಲೇಜು ಉದಾತ್ತ ಮೌಲ್ಯಗಳನ್ನು ಹೊಂದಿರುವ ವೈದ್ಯರನ್ನು ಪೋಷಿಸಿ ಬೆಳೆಸುತ್ತದೆ. ಇಂತಹ ವೈದ್ಯರು ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಸೇವೆ ಮಾಡಲು, ಕೃತಜ್ಞತೆ ಮತ್ತು ತ್ಯಾಗ ಭಾವನೆಯೊಂದಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ. ಈ ಶಿಕ್ಷಣ ವ್ಯವಸ್ಥೆಯು ಯಾವುದೇ ಅರ್ಹ ಅಭ್ಯರ್ಥಿಯು ಉತ್ತಮವಾದ ವೈದ್ಯಕೀಯ ಶಿಕ್ಷಣವನ್ನು ಉಚಿತವಾಗಿ ಪಡೆಯುವಲ್ಲಿ ಸಹಾಯ ಮಾಡುತ್ತದೆ ಮತ್ತು ಭಾರತದಿಂದ ಬುದ್ಧಿವಂತ ಯುವಕ ಯುವತಿಯರು ಹೊರ ದೇಶಕ್ಕೆ ವಲಸೆ ಹೋಗುವುದನ್ನು (brain drain) ಕಡಿಮೆ ಮಾಡಲು ನೆರವಾಗುತ್ತದೆ.