GHN ತಂಡ
ಪ್ರೊ. ಅಫ್ಕ್ಸೆಂಡಿಯೋಸ್ ಕಲಾಂಗೋಸ್
ಸ್ಥಾಪಕ ಮತ್ತು ಅಧ್ಯಕ್ಷ
ಗ್ರೀಸ್‌ನ ಅಥೆನ್ಸ್‌ನಲ್ಲಿರುವ ಯುರೋಕ್ಲಿನಿಕ್ ಆಸ್ಪತ್ರೆಯಲ್ಲಿ ಜನ್ಮಜಾತ ಹೃದಯ ಮತ್ತು ಶ್ವಾಸನಾಳದ ಕಾಯಿಲೆಗಳ ಕೇಂದ್ರದ ನಿರ್ದೇಶಕ. ಅವರು ಇಸ್ತಾನ್‌ಬುಲ್‌ನ ಕೋಕ್ ವಿಶ್ವವಿದ್ಯಾಲಯದಲ್ಲಿ ಹೃದಯರಕ್ತನಾಳದ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಸ್ವಿಟ್ಜರ್ಲೆಂಡ್‌ನ ಜಿನೀವಾ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕರು. ಅವರು ಕಲಾಂಗೋಸ್ ಫೌಂಡೇಶನ್‌ನ ಅಧ್ಯಕ್ಷರು ಮತ್ತು ಸಂಸ್ಥಾಪಕರು, 'ಗ್ಲೋಬಲ್ ಫೋರಂ ಆನ್ ಹ್ಯುಮಾನಿಟೇರಿಯನ್ ಮೆಡಿಸಿನ್ ಇನ್ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿ' ಯ ಅಧ್ಯಕ್ಷರು ಮತ್ತು ಸಂಸ್ಥಾಪಕರು. ಗ್ಲೋಬಲ್ ಹಾರ್ಟ್ ನೆಟ್‌ವರ್ಕ್‌ನ ಅಧ್ಯಕ್ಷರು ಮತ್ತು ಸಹ-ಸಂಸ್ಥಾಪಕರು.
ಪ್ರೊ.ಕಲಂಗೋಸ್ ಅವರು 2014 ರಿಂದ 2015 ರವರೆಗೆ ವರ್ಲ್ಡ್ ಸೊಸೈಟಿ ಆಫ್ ಕಾರ್ಡಿಯೋವಾಸ್ಕುಲರ್ ಮತ್ತು ಥೋರಾಸಿಕ್ ಸರ್ಜನ್ಸ್‌ನ ಅಧ್ಯಕ್ಷರಾಗಿದ್ದರು ಮತ್ತು ಈಗ ಅಲ್ಲಿ ಖಜಾಂಚಿಯಾಗಿದ್ದಾರೆ. ಅವರು ಹೃದಯರಕ್ತನಾಳದ ಶಸ್ತ್ರಚಿಕಿತ್ಸೆ ಮತ್ತು ಹೃದ್ರೋಗ ನಿಯತಕಾಲಿಕಗಳಲ್ಲಿ 300 ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರು JHCVM ಮತ್ತು JPCHD ಯ ಪ್ರಧಾನ ಸಂಪಾದಕರು ಹಾಗೂ ಕಲಾಂಗೋಸ್ ಬಯೋಡಿಗ್ರೇಡಬಲ್ ಆನ್ಯುಲೋಪ್ಲ್ಯಾಸ್ಟಿ ರಿಂಗ್‌ನ ಸಂಶೋಧಕರು - ವಿಶೇಷವಾಗಿ ಮಕ್ಕಳಲ್ಲಿ ಮಿಟ್ರಲ್ ಮತ್ತು ಟ್ರೈಸ್ಕಪಿಡ್ ಕವಾಟಗಳನ್ನು ಸರಿಪಡಿಸಲು ಈ ಸಾಧನವನ್ನು ಬಳಸಲಾಗುತ್ತದೆ.
ನಟಾಲಿಯಾ ಶಟೆಲೆನ್
ಉಪಾಧ್ಯಕ್ಷ
ಹೃದಯ-ನಾಳೀಯ ಶಸ್ತ್ರಚಿಕಿತ್ಸಕಿ
ಹಾರ್ಟ್ ಇನ್ಸ್ಟಿಟ್ಯೂಟ್ ಉಕ್ರೇನ್ ಆರೋಗ್ಯ ಸಚಿವಾಲಯ, ಕೀವ್, ಉಕ್ರೇನ್
ಫೆಲೋ - ಪೀಡಿಯಾಟ್ರಿಕ್ ಹಾರ್ಟ್ ಸರ್ಜರಿ, ಐಸೊ ಚಿಲ್ಡ್ರನ್ಸ್ ಹಾಸ್ಪಿಟಲ್, ಅಥೆನ್ಸ್, ಗ್ರೀಸ್.
ಫೆಲೋ - ಪೀಡಿಯಾಟ್ರಿಕ್ ಮತ್ತು ವಯಸ್ಕ ಜನ್ಮಜಾತ ಶಸ್ತ್ರಚಿಕಿತ್ಸೆ, ಐಸೊ ಮಕ್ಕಳ ಆಸ್ಪತ್ರೆ, ಅಥೆನ್ಸ್, ಗ್ರೀಸ್.
ಶಾನ್ ಸೆಟ್ಟಿ, MD
ವೈದ್ಯಕೀಯ ನಿರ್ದೇಶಕ
ಡಾ.ಸೆಟ್ಟಿ ಕ್ಯಾಲಿಫೋರ್ನಿಯಾ ಮೂಲದ ಹೃದಯ ಶಸ್ತ್ರಚಿಕಿತ್ಸಕ. ಒರೆಗಾನ್ ಹೆಲ್ತ್ ಸೈನ್ಸಸ್ ಯೂನಿವರ್ಸಿಟಿ ಯಲ್ಲಿ ಜನರಲ್ ಸರ್ಜರಿ ರೆಸಿಡೆನ್ಸಿ ಮುಗಿಸಿ ನ್ಯೂಜಿಲೆಂಡ್‌ನ ಗ್ರೀನ್ ಲೇನ್ ಆಸ್ಪತ್ರೆಯಲ್ಲಿ ಮಕ್ಕಳ ಮತ್ತು ವಯಸ್ಕರ ಹೃದಯ ಶಸ್ತ್ರಚಿಕಿತ್ಸಾ fellow ಆಗಿ ಒಂದು ವರ್ಷತರಬೇತಿಯನ್ನು ಪಡೆದರು. ನಂತರ ಅವರು ಹೃದಯ ಶಸ್ತ್ರಚಿಕಿತ್ಸೆಯ ಜನ್ಮಸ್ಥಳವಾದ ಮಿನ್ನೇಸೋಟ ವಿಶ್ವವಿದ್ಯಾಲಯ/ ಲಿಲ್ಲೆಹೈ ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಮೂರು ವರ್ಷಗಳ ಕಾಲ ತಮ್ಮ ಕಾರ್ಡಿಯೋಥೊರಾಸಿಕ್ ಸರ್ಜರಿ ತರಬೇತಿಯನ್ನು ಪೂರ್ಣಗೊಳಿಸಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ರಾಯಲ್ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ಜನ್ಮಜಾತ ಹೃದಯ ಶಸ್ತ್ರಚಿಕಿತ್ಸೆ ಫೆಲೋಶಿಪ್ ಅನ್ನು ಪಡೆದರು. ಡಾ. ಸೆಟ್ಟಿ ಅವರು ಶಸ್ತ್ರಚಿಕಿತ್ಸೆ, ಎದೆಗೂಡಿನ ಶಸ್ತ್ರಚಿಕಿತ್ಸೆ ಮತ್ತು ಜನ್ಮಜಾತ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಟ್ರಿಪಲ್-ಬೋರ್ಡ್-ಪ್ರಮಾಣಿತರಾಗಿದ್ದಾರೆ. ನವಜಾತ ಶಿಶು ಮತ್ತು ಕಸಿ ಶಸ್ತ್ರಚಿಕಿತ್ಸೆ ಸೇರಿದಂತೆ ಮಕ್ಕಳ ಮತ್ತು ವಯಸ್ಕ ಜನ್ಮಜಾತ ಹೃದಯ ಶಸ್ತ್ರಚಿಕಿತ್ಸೆಯ ಎಲ್ಲಾ ಅಂಶಗಳಲ್ಲಿ ಅವರು ಅನುಭವವನ್ನು ಹೊಂದಿದ್ದಾರೆ. ಅವರು ಪ್ರಸ್ತುತ ಮೂಲಭೂತ ಮತ್ತು ಕ್ಲಿನಿಕಲ್ ಹೃದಯ ಸಂಶೋಧನಾ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಡಾ. ಸೆಟ್ಟಿ ಅವರು 'ಮೆಡಿಕಲ್ ಸ್ಕೂಲ್ ಆನರ್ ಸೊಸೈಟಿ, ಆಲ್ಫಾ ಒಮೆಗಾ ಆಲ್ಫಾ' ದ ಸದಸ್ಯರು. ಅನೇಕ ವಿಮರ್ಶಿತ ಪ್ರಕಾಶನಗಳು, ಬುಕ್ ಚಾಪ್ಟರ್ ಗಳು ಮತ್ತು ಸಂಶೋಧನಾ ಪ್ರಸ್ತುತಿ ಗಳನ್ನು ಮಾಡಿದ್ದಾರೆ. ವಿಶ್ವಾದ್ಯಂತ ಅನೇಕ ಮಾನವೀಯ ಅಭಿವೃದ್ಧಿ ಯೋಜನೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.
ಡಾ.ಡೇವಿಡ್ ಕಾರ್ನ್ ಸ್ವೀಟ್
ಅಧ್ಯಕ್ಷ - ಡಿವೈನ್ ವಿಲ್ ಫೌಂಡೇಶನ್
Dr. ಡೇವಿಡ್ ಕಾರ್ನ್ ಸ್ವೀಟ್ ಡಿವೈನ್ ವಿಲ್ ಫೌಂಡೇಶನ್‌ನ ಅಧ್ಯಕ್ಷರಾಗಿ ಮತ್ತು ಸಾಯಿ ಗ್ಲೋಬಲ್ ಫೆಡರೇಶನ್ ಆಫ್ ಫೌಂಡೇಶನ್‌ನ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಗಂಪರ್ಟ್ ಫೌಂಡೇಶನ್‌ನ ಸಹ-ಟ್ರಸ್ಟಿ ಮತ್ತು ನಿರ್ದೇಶಕರಾಗಿದ್ದಾರೆ. ಇದು ಯುನೈಟೆಡ್ ಸ್ಟೇಟ್ಸ್‌ನ ದತ್ತಿ ಸಂಸ್ಥೆಗಳ ಗುಂಪಿಗೆ ಧನಸಹಾಯ, ಸಲಹೆ ಮತ್ತು ತರಬೇತಿಯನ್ನು ಒದಗಿಸುತ್ತದೆ. ಕ್ಲಿನಿಕಲ್ ಸೈಕಾಲಜಿಯಲ್ಲಿ ಡಾಕ್ಟರೇಟ್ ಹೊಂದಿರುವ ಡೇವಿಡ್ 40 ವರ್ಷಗಳಿಂದ ಖಾಸಗಿ ಅಭ್ಯಾಸದಲ್ಲಿ ಮಾನಸಿಕ ಚಿಕಿತ್ಸಕರಾಗಿದ್ದರು ಮತ್ತು ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ಮನೋವಿಜ್ಞಾನ ಮತ್ತು ನಿರ್ವಹಣೆಯಲ್ಲಿ ಪಾಠ ಮಾಡಿದ್ದಾರೆ. ತನ್ನ ಹದಿಹರೆಯದ ವರ್ಷಗಳಿಂದ ಸೇವೆ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಳವಾಗಿ ತೊಡಗಿಸಿಕೊಂಡಿರುವ ಅವರು ಆಧ್ಯಾತ್ಮಿಕತೆಯನ್ನು ಕಾರ್ಯರೂಪಕ್ಕೆ ತರಬೇಕು ಮತ್ತು ನಿಸ್ವಾರ್ಥ ಸೇವೆ ಒದಗಿಸುವವರಿಗೂ ಸ್ವೀಕರಿಸುವವರಷ್ಟೇ ಫಲವು ಸಿಕ್ಕುತ್ತದೆ ಎಂದು ನಂಬುತ್ತಾರೆ. ಡೇವಿಡ್ ಕ್ಯಾಲಿಫೋರ್ನಿಯಾ ಸ್ಟೇಟ್ ಮಿಲಿಟರಿ ರಿಸರ್ವ್‌ನಲ್ಲಿ ಸೇವೆ ಸಲ್ಲಿಸುತ್ತ ಅಲ್ಲಿ combat lifesaving ಕಲಿಸುವ ಘಟಕವನ್ನು ನಿರ್ವಹಿಸುತ್ತಿದ್ದರು ಮತ್ತು ಕ್ಯಾಲಿಫೋರ್ನಿಯಾ ನ್ಯಾಷನಲ್ ಗಾರ್ಡ್‌ಗಾಗಿ ಟ್ರೂಪ್ ಮೌಲ್ಯಮಾಪನ ಮಾಡಿದ್ದರು.
ಡಾ. ಆಂಡ್ರಿಯಾಸ್ ಸಿ ಪೆಟ್ರೋಪೌಲೋಸ್
ಸದಸ್ಯ
ಸಂಸ್ಥಾಪಕ ಸದಸ್ಯ (2011), ಮಂಡಳಿಯ ಸದಸ್ಯ, ಮತ್ತು W.G. Prevention of Cardiac Diseases ನ ವೈಜ್ಞಾನಿಕ ಸಂಯೋಜಕ. ಅಲ್ಲದೆ, 2014 ರಿಂದ W.G.: Heart Failure, Pulmonary Hypertension and HTx ರ ಸ್ಥಾಪಕ ಸದಸ್ಯ. ಡಾ. ಪೆಟ್ರೋಪೌಲೋಸ್ ರವರು ಯುರೋಪಿಯನ್ ಪೀಡಿಯಾಟ್ರಿಕ್ ಅಕಾಡೆಮಿ, ಯುರೋಪಿಯನ್ ಪೆಡಿಯಾಟ್ರಿಕ್ ಅಸೋಸಿಯೇಷನ್, ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಯುರೋಪಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ ಮತ್ತು ಜನ್ಮಜಾತ ಹೃದ್ರೋಗ ಸಂಸ್ಥೆ, ಯುರೋಪಿಯನ್ ಹಾರ್ಟ್ ಅಸೋಸಿಯೇಷನ್, ಯುರೋಪಿಯನ್ ಸೊಸೈಟಿ ಫಾರ್ ಪೀಡಿಯಾಟ್ರಿಕ್ ಅಂಡ್ ನಿಯೋನೇಟಲ್ ಇಂಟೆನ್ಸೀವ್ ಕೇರ್ ಅಂಡ್ ಪೀಡಿಯಾಟ್ರಿಕ್ ಕಾರ್ಡಿಯಾಕ್ ಇಂಟೆನ್ಸೀವ್ ಕೇರ್ ಸೊಸೈಟಿ, USA - ಇವುಗಳ ಸದಸ್ಯರು.
ಅವರು ಪ್ರಸ್ತುತ CICU-ECMO ಜೊತೆಗೆ ಸೈಪ್ರಸ್ ಮತ್ತು ಗ್ರೀಸ್‌ನಲ್ಲಿ ಭ್ರೂಣ, ಪೀಡಿಯಾಟ್ರಿಕ್ ಮತ್ತು ಪ್ರೌಢ ವಯಸ್ಕರ ಜನ್ಮಜಾತ ಕಾರ್ಡಿಯಾಲಜಿ ಸೇವೆಗಳನ್ನು ಒದಗಿಸುವ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಬಾಕು-ಅಜೆರ್‌ಬೈಜಾನ್‌ನಲ್ಲಿ ತಮ್ಮ ಶೈಕ್ಷಣಿಕ ಹುದ್ದೆಯನ್ನು ಮತ್ತು ಅಥೆನ್ಸ್ ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಬೋಧಕ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.
ರಮೇಶ್ ಧರ್ಮರಾಜ್
ಟೆಕ್ನಾಲಜಿ ಸೊಲ್ಯೂಷನ್ಸ್ ನಿರ್ದೇಶಕ
ನಿಪುಣ ಮಾಹಿತಿ ತಂತ್ರಜ್ಞಾನ (IT) ವೃತ್ತಿಪರರು ಹಾಗೂ product development, cloud solutions, healthcare, ಮತ್ತು ERP systems ವಿಷಯಗಳಲ್ಲಿ ವ್ಯಾಪಕ ಪರಿಣತಿಯನ್ನು ಹೊಂದಿರುವ ಅನುಭವಿ. IT ಕಾರ್ಯತಂತ್ರದ ಕಾರ್ಯಕ್ರಮ ನಿರ್ವಹಣೆ ಮತ್ತು ನವೀನ AI- ಚಾಲಿತ ಪರಿಹಾರಗಳ ಮೂಲಕ ಗ್ರಾಹಕರಿಗೆ ಅಪಾರ ಅನುಕೂಲವನ್ನು ಮತ್ತು ಮೌಲ್ಯವನ್ನು ಪರಿಣಾಮಕಾರಿಯಾಗಿ ತಲುಪಿಸುವ ಸಾಮರ್ಥ್ಯವನ್ನುಹೊಂದಿದವರು. ಸಂಕೀರ್ಣ, ಎಂಟರ್‌ಪ್ರೈಸ್-ಮಟ್ಟದ IT, AI ಮತ್ತು ERP ಅಪ್ಲಿಕೇಶನ್ ಗಳನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ನಿಯೋಜಿಸುವಲ್ಲಿ ನುರಿತ ಅವರು ಸಾಂಸ್ಥಿಕ ಗುರಿ ಸಾಧಿಸುವುದರಲ್ಲಿ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿರುತ್ತಾರೆ.